ಅಗರು ಶುಂಠಿ ಗಿಡ ಕಾಡು ಶುಂಠಿ ವರ್ಗದ ಒಂದು ಸಸ್ಯ. ಶುಂಠಿಯಂತಹುದೆ ಗೆಡ್ದೆ, ಲಾವಂಚದ ಗಿಡದ ಎಲೆಯಂತಹ ಎಲೆಯನ್ನು ಹೊಂದಿದೆ. ಗಿಡವು ಶುಂಠಿ, ಕರ್ಪೂರದಂತೆ ಪರಿಮಳ ಹೊಂದಿದೆ. == ಸಸ್ಯಶಾಸ್ತ್ರೀಯ ಹೆಸರು == ಜಿಂಜಿಬೆರ್ ಜೆರುಂಬೆಟ್ ಎಂಬುದು ಸಸ್ಯ ಶಾಸ್ತ್ರೀಯ ಹೆಸರು.ವಾಣಿಜ್ಯಿಕವಾಗಿ ಇದನ್ನು ಆಂಗ್ಲ ಭಾಷೆಯಲ್ಲಿ ಶಾಂಪೂ ಜಿಂಜರ್ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಅಗಲುಶುಂಠಿ, ಕಲ್ಲುಶುಂಠಿ ಎಂದೂ ಕರೆಯುತ್ತಾರೆ. == ಔಷಧೀಯ ಸಸ್ಯ == ಇದರ ಸಾರದಿಂದ ಸಂಗ್ರಹಿಸಿದ ಝಡ್.ಝೆರುಂಬೆಟ್ (.) ಮಾನವ ಯಕೃತ್ತಿನ ಕ್ಯಾನ್ಸರ್‍ನ ಜೀವಕೋಶಗಳ ನಿಯಂತ್ರಿತ ನಾಶವನ್ನು ಪ್ರೇರೇಪಿಸುತ್ತದೆ ಎಂದು ಪ್ರನಾಳೀಯ ಪ್ರಯೋಗದಲ್ಲಿ ಕಂಡುಬಂದಿದೆ. == ಉಲ್ಲೇಖಗಳು ==